೮ನೆ ಮಾರ್ಚ್, ೨೦೧೧ ವರ್ಷದ ಅಂತರಾಷ್ಟ್ರಿಯ ಮಹಿಳಾದಿನದಂದು ರಚಿಸಿದ-
ಭಾರತ ಮಹಿಳೆಯ ಸ್ತುತಿ- ಡಾ ವಿ ಬಿ ಆರತಿ
ಭಾರತ ಮಹಿಳೆಯ ಸ್ತುತಿ
ಅದ್ವಿತೀಯಳು ನೀನು ಭಾರತದ ನೀರೆ |
ಚೆಲುವು ಗೆಲುವುಗಳಿಂದ ಮಿರಿಮಿರಿವ ತಾರೆ ||
ಪ್ರೇಮದಲಿ ನೇಮದಲಿ ಸಾಟಿ ನಿನಗಾರೆ? |
ಧರ್ಮ ಕರ್ಮಗಳರಿತು ನಡೆವೆ ನೀ ಚತುರೆ ||
ನಳಿನಳಿಪೆ ಸುಂದರಿಯೆ ತೊಟ್ಟು ನೀ ಸೀರೆ |
ಒಲವಿನಿಂ ಕಂದನನು ಗೊಳುವೆ ನೀ ಸೂರೆ ||
ಖಡ್ಗವನು ಹಿಡಿದೆ ನೀ ರಣದಲ್ಲಿ ಶೂರೆ |
ಲೇಖನಿಯಲೂ ನೋಡೆ ನಿನ್ನ ನುಡಿಧಾರೆ ||
ಕಷ್ಟಗಳ ಸಹಿಸಿರುವೆ ಕ್ಷಮೆಯ ಸಿರಿ ಧಾರೆ |
ನುಂಗಿ ನೋವನು ನಗುವೆ ಶಾಂತಿಯನು ಬೀರೆ ||
ಉದ್ಯೋಗ ವ್ಯಾಪಾರ ಸೇನೆಯಲು ವೀರೆ |
ಎಲ್ಲ ಕ್ಷೇತ್ರದಿ ಬೆಳಗಿ ನಿಂದಿರುವೆ ಪೋರೆ ||
ಸತ್ವದಲಿ ಲಕ್ಷ್ಮಿ ನೀ ವಾಣಿ ನೀ ಚತುರೆ |
ಶಕ್ತಿಯಲಿ ದುರ್ಗೆಯನು ತೋರು ನೀ ಬಾರೆ ||
ಮರೆಯದಿರು ನಿನ್ನಾಳ ಭಿತ್ತರವ ಗೌರೆ |
ಅರಳು ಪೂರ್ಣತೆಯಿಂದ ಹಿರಿಬೆಳಕ ಬೀರೆ ||
ಛಲದಿಂದ ಸಾಪಲ್ಯ ಶಿಖರಗಳನೇರೆ |
ಸೋಲಿಲ್ಲ ನಿನಗೆ ಮುನ್ನಡೆಯುತಿರು ಧೀರೆ ||
ವಿಶ್ವದಲಿ ಮಿನುಗು ನೀ ಹೇ ಭರತ ನೀರೆ |
ಶಾಂತ ಶಕ್ತಿಯೇ ಸತತ ಮಿನುಗುತಿರು ತಾರೆ ||
kavithe kalodakku mattu odudakku tumba sogasagide, but I am sorry I think today's Indian women are not like that. I can compare this poem to my mother's generation women.
ಪ್ರತ್ಯುತ್ತರಅಳಿಸಿHoudu ee kavithe odoke chennagide adre Ivatthina Narimanigalu haagilla but arathi madam Nimmanna nodudre Khushi agutthe Gourava barutthe ee padya nimge Hondutte yakandre neevu madtha iro kelsa haagu nimma samaajika naduvalike haagide
ಪ್ರತ್ಯುತ್ತರಅಳಿಸಿnimmanthavaru namma madye irodhu namge hemme