ವಿಶ್ವ - ಹಳೆಯೂ ಹೌದು ಹೊಸತೂ ಹೌದು
ಹಳೆಯದರೊಳು ಹಳೆಯದೀ ವಿಶ್ವವೆಂಬ ವಿಸ್ಮಯ |
ಚಣಚಣದಲು ಹೊಸತೆರದಲಿ ತೋರುತಿಹುದು ನಿಶ್ಚಯ ||
ಭಾನು ಚಂದ್ರರವರೆ ದಿನವು ಗಗನವೇರಿ ನಗುತಿರೆ |
ಮನುಜರೆಲ್ಲ ಸಡಗರದಲಿ ಅಹ ಹೊಸ ದಿನವೆನುವರೆ ||
ಹಸಿವು ಅದುವೆ ಕೃಷಿಯು ಅದುವೆ ಅದೆ ನಗುವಳುವಾಟವು |
ಆದರಲ್ಲಿ ಹೊಸ ಬೆಳಕನು ಹುಡುಕುವ ತಡಕಾಟವು ||
(೨೦೦೧ ರಲ್ಲಿ ರಚಿಸಿದ್ದು)
ಹರಿಃ ಒಮ್ | ಆರ್ಯೇ ಆರತಿ, ಸುಂದರಂ ಸಂಭರಣಮ್ | ಅಭಿನಮಾಂಸಿ |ಸಂಸ್ಕೃತೇನ ಎಕಂ ಬ್ಪಾಗ್ ಆರಭ್ಯತಾಮ್ |
ಪ್ರತ್ಯುತ್ತರಅಳಿಸಿ