ಜನ ಚರಿಸದ ದಾರಿ
The Road Not Taken ಪದ್ಯದ ಭಾವಾನುವಾದ
ಪಯಣಿಸುತ್ತಲಿ ಕಂಡೆ ಕವಲೊಡೆದ ದಾರಿಯನು
ಪೀತವರ್ಣದ ದಟ್ಟ ಕಾಡ ನಡುವೆ |
ಎರಡರಲು ಒಮ್ಮೆಲೆಯೆ ಚರಿಸಲಾಗದು ಎಂದು
ಯಾವುದದು ಹಿತವೆಂದು ನಾನು ಬಹುವೆ ||
ಚಿಂತಿಸಿದೆ ಕಣ್ಣರಳಿಸೀಕ್ಷಿಸುತ ಎರಡನ್ನು
ಇಣುಕುತಲಿ ಪೊದೆಮುಳ್ಳುರಾಶಿಯಂದು |
ಬಾಗಿ ನೋಡಿದೆ ಮರಳಿ ಕಣ್ಣು ಕಂಡಷ್ಟನ್ನು
ಮಾರ್ಗವೆಲ್ಲಿಗೆ ತಲುಪಿ ನಿಲುವುದೆಂದು ||
ಒಂದರಲಿ ಬಹು ಜನರು ನಡೆನಡೆದು ಪೋದುದನು
ಸವೆದ ನೆಲ-ಹುಲ್ಲುಗಳೆ ಸಾರಿದ್ದವು |
ಮತ್ತೊಂದು ದಾರಿಯದು ನಿರ್ಜನವು ಎಂಬುದನು
ಬೆಳೆದ ಹಸಿಹುಲ್ಲುಗಳೆ ತೋರಿದ್ದವು ||
ಜನ ಹಿಂದೆ ನಡೆದಿಲ್ಲವೆಂದು ತಿಳಿದರು ಕೂಡ
ಆಯ್ದುಕೊಂಡೆನು ಇದನೆ ಕೌತುಕದಲಿ |
’ಮುನ್ನಡೆವೆ ಹೊಸದೊಂದು ಹಾದಿಯಲಿ ಒಂಟಿಯಾ
ಗೆಂ’ಬ ಕೆಚ್ಚಿನ ದಿಟ್ಟ ಭಾವದಲ್ಲಿ ||
’ಜನರ ಮಾರ್ಗದೊಲಾನು ಮತ್ತೊಮ್ಮೆ ಹೋದರಾ-
ಯ್ತಿಂದಿಗಿದೆ ನನಗಿರಲಿ ನೂತ್ನ ಮಾರ್ಗ, |
ನನ್ನದೇ ಮೊದಲ ಹೆಜ್ಜೆಗಳಿರಲಿ ಪಥದೊಳಗೆ’
ಎಂಬ ಹೆಬ್ಬಯಕೆಯಿಂ ಹೊರಟೆನಾಗ ||
ಮುಸುಕಿನಲಿ ಪಯಣಿಸಿದೆ ನಿರ್ಜನದ ಮಾರ್ಗದಲಿ
ಕಲ್ಲುಮುಳ್ಳುಗಳನ್ನು ಎದುರಿಸಂದು |
’ಹೀಗೇಕೆ ಬಂದೆ? ಸರಿಯೋ ತಪ್ಪೋ? ಹಿಂದಿರುಗಿ
ಹೋಗಲೇನ್’ ಎಂಬ ಭಯ ಕಾಡಿತಂದು ||
ಅಂದು ನಾನಾಯ್ದುಕೊಂಡೆನು ಅನ್ಯ ಮಾರ್ಗವನು
ಬೇಡವೆಂದರು ಮನವು ಭಯದಿ ನೊಂದು |
ವರುಷಗಳೆ ಸಂದಿಹವು ಆ ಬಳಿಕ ಎನಗಾದ
ಅನುಭವವ ಪೇಳುವೆನು ಕೇಳಿರಿಂದು ||
ನಾನಂದು ಜೀವನವನನ್ಯಮಾರ್ಗದಿ ನಡೆದೆ
ಇದೆ ಕಾರಣವು ಎಲ್ಲ ನವ್ಯವಿಲ್ಲಿ |
ನನಗು ಮಿಕ್ಕೆಲ್ಲರಿಗು ವ್ಯತ್ಯಾಸವಿದುವೆ ದಿಟ
ಬಾಳ ಸೊಗ ಬೇರೆನ್ನ ವಿಷಯದಲ್ಲಿ ||
source poem in English-
The Road Not Taken
(by Robert Frost (1874–1963)
TWO roads diverged in a yellow wood,
And sorry I could not travel both
And be one traveler, long I stood
And looked down one as far as I could
To where it bent in the undergrowth;
Then took the other, as just as fair,
And having perhaps the better claim,
Because it was grassy and wanted wear;
Though as for that the passing there
Had worn them really about the same,
And both that morning equally lay
In leaves no step had trodden black.
Oh, I kept the first for another day!
Yet knowing how way leads on to way,
I doubted if I should ever come back.
I shall be telling this with a sigh
Somewhere ages and ages hence:
Two roads diverged in a wood, and I—
I took the one less traveled by,
And that has made all the difference.
ಅನುವಾದ ಪ್ರಕ್ರಿಯೆ ಎಲ್ಲರಿಗೂ ಒಗ್ಗುವುದಿಲ್ಲ. ಕೆಲವು ಪುಸ್ತಕಗಳನ್ನು ರವಿಬೆಳಗೆರೆ, ವಿಶ್ವೇಶ್ವರ ಭಟ್ ರಂಥವರು ಅನುವಾದಿಸುತ್ತೇವೆಂದು ಬೋರು ಹೊಡೆಸಿದ್ದಾರೆ. ಅನುವಾದದಲ್ಲಿ ಮೂಲ ಕೃತಿಯ ಭಾವದ ಆಳಗಲಗಳನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಕಷ್ಟ. That way 'No Road Taken' is an humble effort of yours I hope, Good !
ಪ್ರತ್ಯುತ್ತರಅಳಿಸಿ