I T ಯುವಕನ ಧೋರಣೆ (೨೦೦೬)
ನಾನು ಹಗಲು ಇರುಳು ಓದಿ BE ಪಾಸು ಆದೆನು |
ಯಾರು ನನಗೆ ಸಾಟಿ ಈಗ ಸೊಕ್ಕಿನಲ್ಲಿ ಮೆರೆವೆನು ||
ಅಮ್ಮನಿಗೊ housekeepingಬಿಟ್ಟು ಏನು ಗೊತ್ತಿದೆ? |
ಅಪ್ಪನ work experienceಉ outdated ಆಗಿದೆ ||
ಕಾಲವು ಮುಂಬರಿದು ಹೋಯ್ತು ಹಿರಿಯರು ಹಿಂದುಳಿದರು |
ನನ್ನ ಮಾರ್ಗ ವೇಗದಲ್ಲಿ ನಡೆಯಲಾಗದಾದರು ||
IT ಯವರ ಕಷ್ಟಸುಖದ ಪರಿಯೆ ಬೇರೆಯಾಗಿದೆ |
ಹೇಳಿ ಹಂಚಿಕೊಳಲು IT ಯುವತಿಯೆ ಬೇಕಾಗಿದೆ ||
ಕುಲವು ಸಂಪ್ರದಾಯ ದೇಶ ಭಾಷೆ ಎಂದು ನನ್ನನು |
ಕಟ್ಟಿಹಾಕಲಾಗದು ಬಿಡಿ ಧನವೆ ನನ್ನ ದೇವನು ||
ಬಿಳಿಯರೀವ dollarಗಾಗಿ ಹಗಲು ರಾತ್ರಿ ದುಡಿವೆನು |
ದುಡಿದುದನ್ನು clubಉ bar-resortಉಗಳಲಿ ಸುರಿವೆನು ||
ಮುಂದೆ ಓದಿ ಕಲಿತು ನಾನು ಪಡೆಯಲೇನು ಉಳಿದಿದೆ |
IT degreeಯೊಂದೆ ಸಾಕು ಜ್ಞಾನಪೀಠವೆನಿಸಿದೆ ||
ನನ್ನ styleಉ tasteಉ ಗಳಿಗೆ ತಂದೆತಾಯರೊಗ್ಗರು |
ಸಾಕು ಇನ್ನು oldagehome ಇನಲ್ಲಿ ಇರಲಿ ಮುದಿಯರು ||
siteಉ flatಉ shareಉ carಉ ಸುಲಭ ಕೊಳಲು ಎಲ್ಲವು |
ಹಣದ ಬಲವು ನನಗೆ ಇಹುದು ನನಗೆ ಸಾಟಿ ಇಲ್ಲವು ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ