ಶುಕ್ರವಾರ, ನವೆಂಬರ್ 25, 2011

ಕನ್ನಡಿ (೨೦೦೦) ತಾತ್ವಿಕ ದೃಷ್ಟಿಯಿಂದ

ಕನ್ನಡಿ (೨೦೦೦) ತಾತ್ವಿಕ ದೃಷ್ಟಿಯಿಂದ

ಸೋಜಿಗದ ಕನ್ನಡಿಗೆ ಬ್ರಹ್ಮವೇ ಉಪಮೆ |
ನಿರ್ವಿಕಲ್ಪದ ತಾನು ಕಲ್ಪಗಳ ಸೀಮೆ ||
ನಿಶ್ಚಲವು ತಾನಿರಲು ತೇಲುತಿಹುದಲ್ಲ |
ತನ್ನೊಳಗೆ ಜೀವನದ ಚಲಚಿತ್ರವೆಲ್ಲ ! ||
ನಗುವರಳುವರ ನಾಚುವರ ಹಿಗ್ಗುವವರ |
ಪರಿಯ ಬಿಂಬಿಸುವ ದಿಟದನುಕರಣಚತುರ ||
ರಸವ ತಾ ಮೀರಿರಲು ನವರಸಗಳೆಲ್ಲ |
ಹಾವಭಾವಗಳಾಗಿ ತೋರುತಿಹುವಲ್ಲ! ||

1 ಕಾಮೆಂಟ್‌:

  1. ಅಂಟಿರುವುದು ಅಂತರಂಗದ ಕನ್ನಡಿಯ ಮೇಲೆ |
    ಇಂದ್ರಿಯದ ಸ್ಪರ್ಶದಿಂದೆದ್ದ ಜಿನುಗು ||
    ನಿರ್ಮಮದ ಬಟ್ಟೆಯಲಿ ಸ್ವಚ್ಚವಾಗಿಸಿ ನಾ |
    ಕಂಡೆನು ಮತ್ತೊಮ್ಮೆ ಬೆಳದಿಂಗಳಾ ಹೊಳಪು ||

    ಕವಿದಿದೆ ಅಹಂಕಾರದ ಕಪ್ಪು ಧೂಳು |
    ಕರ್ತೃತ್ವವನು ಒದರಿ ಒರೆಸಲು ನೋಡಿ ||
    ಹೊಳೆಯಿತು ಮತ್ತೊಮ್ಮೆ ಮೊದಲಿದ್ದ ಹಾಗೆ |
    ನಡೆಯಿತು ಭಗವಂತನಿಗೆ ಕನ್ನಡಿಯ ಸೇವೆ ||

    ಪ್ರತ್ಯುತ್ತರಅಳಿಸಿ